Ticker

6/recent/ticker-posts

*ಸಾಧ್ಯವಾದರೆ ಓಡು* *ಆಗಲಿಲ್ಲವಾದರೆ ನಡೆ*
*ಅದೂ ಸಾಧ್ಯವಾಗದಿರೆ*
*ಉರುಳಿ ಕೊಂಡು ಹೋಗು ಅಷ್ಟೇ!*
*ಆದರೆ ಕದಲದೇ*
*ಬಿದ್ದಿರಬೇಡ ಒಂದೇ ಕಡೆ*



*ಕೆಲಸ ಸಿಗಲಿಲ್ಲವೆಂದು,*
*ವ್ಯಾಪಾರ ನಷ್ಟವಾಯಿತೆಂದು*

Basavaraj sutar

 *ಗೆಳೆಯ ಮೋಸಮಾಡಿದನೆಂದು, ಪ್ರೀತಿಸಿದವರು ಕೈಬಿಟ್ಟರೆಂದು!!*

*ಹಾಗೆ ಇದ್ದರೆ ಹೇಗೆ..?ದಾಹಕ್ಕೆ ಬಾರದ ಸಮುದ್ರದ ಅಲೆಗಳು ಕೂಡಾ ಕುಣಿದು ಕುಪ್ಪಳಿಸುತ್ತವೆ ನೋಡು!*

*ಮನಸು ಮಾಡಿದರೇ...*
*ನಿನ್ನ ಹಣೆಬರಹ ಇಷ್ಟೇ ಅಂದವರೂ ಸಹ...*
*ನಿನ್ನ ಮುಂದೆ ತಲೆ ತಗ್ಗಿಸುವ ತಾಕತ್ತು ನಿನ್ನಲ್ಲಿದೆ*

*ಅಂತದ್ದರಲ್ಲಿ ಈ ಪುಟ್ಟ ಕಷ್ಟ ಕೋಟಲೆಗೆ ತಲೆ ಬಾಗಿದರೆ ಹೇಗೆ?*

*ಸೃಷ್ಟಿ ಚಲನಶೀಲ ಯಾವುದೂ ನಿಲ್ಲಬಾರದು*

*ಹರಿಯುವ ನದಿ*
*ಬೀಸುವ ಗಾಳಿ ತೂಗುವ ಮರ*
*ಹುಟ್ಟೋ ಸೂರ್ಯ ಅಂದುಕೊಂಡಿದ್ದನ್ನು ಸಾಧಿಸಬೇಕೆಂದು ನಿನ್ನಲ್ಲಿ ಛಲದಿಂದ ಹರಿಯುವ ರುಧಿರ ಸಹ ಯಾವುದೂ ನಿಲ್ಲಬಾರದು.*

*ಏಳು... ಎದ್ದೇಳು ಹೊರಡು...*
*ನಿನ್ನನ್ನು ಅಲಗಾಡದಂತೆ ಮಾಡಿದ ಆ ಮಾನಸಿಕ* *‌ಸಂಕೋಲೆಗಳನ್ನು ಬೇಧಿಸು,*
*ಬಿದ್ದ ಜಾಗದಿಂದಲೇ ಓಟ ಶುರು ಮಾಡು*

*ನೀನು ಮಲಗಿದ ಹಾಸಿಗೆ ನಿನ್ನನ್ನು ಅಹಸ್ಯಪಡುವ ಮುನ್ನ ಅಲಸ್ಯವನ್ನು ಬಿಡು*

*ಕನ್ನಡಿ ನಿನ್ನನ್ನು ಪ್ರಶ್ನಿಸುವ ಮುನ್ನ ಉತ್ತರ ಹುಡುಕು*

*ನೆರಳು ನಿನ್ನನ್ನು ಬಿಡುವ ಮುನ್ನ ಬೆಳಕಿಗೆ ಬಾ*

*ಮತ್ತೆ ಹೇಳುತ್ತಿದ್ದೇನೆ... ಕಣ್ಣೀರು ಸುರಿಸುವುದರಿಂದ ಅದು ಸಾಧ್ಯವಿಲ್ಲ! ಬೆವರು ಸುರಿಸುವುದರಿಂದ ಮಾತ್ರ ಚರಿತ್ರೆ ಸೃಷ್ಟಿಸಬಹುದೆಂದು ತಿಳಿದುಕೋ...*

*ಓದಿದರೆ ಇವು ಪದಗಳಷ್ಟೇ... ಆದರೆ ಆಚರಿಸಿದಾಗ ಅಸ್ತ್ರಗಳು..!!!!! ಮಹಾ ಶಸ್ತ್ರಗಳು!!!!!!!!!!!!!!!*

Post a Comment

0 Comments