Ticker

6/recent/ticker-posts

*ಕೆ ಪಿ ಟಿ ಸಿ ಎಲ್ ನೇಮಕಾತಿ: ಪ್ರವೇಶ ಪತ್ರ ಪ್ರಕಟ

*ಕೆ ಪಿ ಟಿ ಸಿ ಎಲ್ ನೇಮಕಾತಿ: ಪ್ರವೇಶ ಪತ್ರ ಪ್ರಕಟ*
*============*
*ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿನ ಎಇ/ಜೆಇ/ಕೆಮಿಸ್ಟ್/ಕೆಮಿಕಲ್ ಸೂಪರ್ವೈಸರ್ ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆ ಪ್ರವೇಶ ಪತ್ರವನ್ನು ಪ್ರಕಟಿಸಲಾಗಿದೆ.*
*============*
*ಅರ್ಹ ಅಭ್ಯರ್ಥಿಗಳು ನಿಯಮಿತದ ವೆಬ್ಸೈಟ್ ಮೂಲಕ ಪರೀಕ್ಷಾ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ*
*===============*
*ಪರೀಕ್ಷೆಗಳು ರಾಜ್ಯದ ಆರು ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದ್ದು, ಅಭ್ಯರ್ಥಿಗಳು ಕಡ್ಡಾಯವಾಗಿ ಪ್ರವೇಶಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳತಕ್ಕದ್ದು.*

==============
*ಲಿಖಿತ ಪರೀಕ್ಷೆ ವಿವರ ಲಿಖಿತ ಪರೀಕ್ಷೆಯನ್ನು ನೂರು ಅಂಕಗಳಿಗೆ ಸಂಬಂಧಿಸಿದ ತಾಂತ್ರಿಕ ವಿಷಯಗಳಲ್ಲಿ ನಡೆಸಲಾಗುವುದು. ಪ್ರಶ್ನೆಗಳು ಆಬ್ಜೆಕ್ಟಿವ್ ಮಾದರಿಯದಾಗಿದ್ದು, ಬಹು ಆಯ್ಕೆಯ ಉತ್ತರಗಳಿರುತ್ತವೆ. ಅಭ್ಯರ್ಥಿಗಳು ಓಎಮ್ಆರ್ ಹಾಳೆಗಯಲ್ಲಿ ಉತ್ತರವನ್ನು ಗುರುತು ಮಾಡಬೇಕು. ಇಂಜಿನಿಯರಿಂಗ್ ಹುದ್ದೆಗಳ ಪ್ರಶ್ನೆ ಪತ್ರಿಕೆಗಳು ಆಂಗ್ಲ ಆವೃತ್ತಿಯಲ್ಲಿ ಹಾಗೂ ಕೆಮಿಸ್ಟ್/ಕೆಮಿಕಲ್ ಸೂಪರ್ವೈಸರ್ ಹುದ್ದೆಗಳ ಪ್ರಶ್ನೆಪತ್ರಿಕೆಗಳು ಕನ್ನಡ ಮತ್ತು ಆಂಗ್ಲ ಎರಡೂ ಆವೃತ್ತಿಗಳಲ್ಲಿರುತ್ತವೆ. ಕನ್ನಡ ಭಾಷಾ ಪರೀಕ್ಷೆ ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಅಭ್ಯಾಸ ಮಾಡದಿದ್ದಲ್ಲಿ ಅಂತಹ ಅಭ್ಯರ್ಥಿಗಳು ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣ ಹೊಂದಬೇಕಾಗುತ್ತದೆ. ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಲಾಗುವುದು.*

 *ಪ್ರಮುಖ ದಿನಾಂಕಗಳು ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಲು ಕೊನೆಯ ದಿನಾಂಕ: 19-01-2018 ಲಿಖಿತ ಪರೀಕ್ಷಾ ದಿನಾಂಕ: 21-01-2018 ಕನ್ನಡ ಭಾಷಾ ಪರೀಕ್ಷೆ ದಿನಾಂಕ: 28-01-2018*

*ಪರೀಕ್ಷಾ ಕೇಂದ್ರಗಳು*
*===============*
*ಬೆಂಗಳೂರು, ಬಳ್ಳಾರಿ, ಬೆಳಗಾಂ, ಕಲಬುರ್ಗಿ, ಮೈಸೂರು, ಶಿವಮೊಗ್ಗ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ*
*================*
http://karnatakapower.com/recruitment_KPCL.ASP

Post a Comment

0 Comments