Kannada general knowledge question answers
💐💐ಭಾರತದ ಭೂಗೋಳ💐💐
1. ಭಾರತವು ಏಷ್ಯಾ ಖಂಡದಲ್ಲಿದೆ.
2. ಭಾರತವು ಭೂಮಿಯ ಉತ್ತರಾರ್ದಗೊಳದಲ್ಲಿದೆ.
3. ಭಾರತದ ಉಪಖಂಡದ ದಕ್ಷಿಣದ ತುದಿ ಇಂದಿರಾ ಪಾಯಿಂಟ.
4. ಇಂದಿರಾ ಪಾಯಿಂಟ ದಿ ಗ್ರೇಟ್ ನಿಕೋಬಾರ್ ದ್ವೀಪದಲ್ಲಿದೆ.
5. ಭಾರತದ ಕೇಂದ್ರ ಭಾಗದಲ್ಲಿ ಹಾದು ಹೋಗುವ ಆಕ್ಷಾಂಶ 23 1/2 ಉತ್ತರ ಅಕ್ಷಾಂಶ.
6. ಭಾರತದ ಅತ್ಯಂತ ದಕ್ಷಿಣದ ಪ್ರದೇಶ ಕನ್ಯಾಕುಮಾರಿ.
7. ಕರ್ಕಾಟಕ ಸಂಕ್ರಾಂತಿ ವೃತ್ತವು ಭಾರತದ 8 ರಾಜ್ಯಗಳ ಮೂಲಕ ಹಾದು ಹೋಗುತ್ತದೆ. ಅವು ಗುಜರಾತ, ರಾಜಸ್ಥಾನ, ಮದ್ಯಪ್ರದೇಶ, ಚತ್ತೀಸಗರ್, ಜಾರ್ಖಂಡ, ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ಮಿಜೋರಾಂ ಮೂಲಕ ಹಾದು ಹೋಗುತ್ತದೆ.
8. ಭಾರತದ ಆದರ್ಶ ಕಾಲವನ್ನು 82 1/2 ಡಿಗ್ರಿ ಪೂರ್ವ ರೇಖಾಂಶವನ್ನು ಆಧರಿಸಿ ತಿಳಿಯಲಾಗುತ್ತದೆ.
9. ಭಾರತದ ಒಟ್ಟು ಭೌಗೋಳಿಕ ಕ್ಷೇತ್ರ 32,87,263 ಚ.ಲಿ.ಮೀ (32.87 ಲಕ್ಷ)
10. ಭಾರತದ ಭೂಗಡಿ ರೇಖೆಯ ಉದ್ದ 15,200 ಕಿ ಮೀ 17 ರಾಜ್ಯಗಳು ಗಡಿಗೆ ಹೊಂದಿ ಇದ್ದು. 7 ದೇಶಗಳೊಂದಿಗೆ ಭೂ ಗಡಿಯನ್ನು ಹೊಂದಿದೆ.
11. ಭಾರತದ ಸಮುದ್ರ ತೀರ ಪ್ರದೇಶದ ಉದ್ದ 6,100 ಕಿ ಮೀ ಇದ್ದು. ದ್ವೀಪಗಳನ್ನು ಸೇರಿಸಿ 7,516.6 ಕಿ ಮೀ ಇದೆ.
12. ಭಾರತ ಮತ್ತು ಪಾಕಿಸ್ತಾನದ ಗಡಿ ರೇಖೆಯನ್ನು ರ್ಯಾಡಕ್ಲೀಪ್ ಎನ್ನುವರು. ಭಾರತ ಮತ್ತು ಅಪಘಾನಿಸ್ತಾನದ ಗಡಿ ರೇಖೆಯನ್ನು ಡ್ಯೂರಾಂಡ ಎನ್ನುವರು. ಭಾರತ ಮತ್ತು ಚೈನಾ ಗಡಿ ರೇಖೆಯನ್ನು ಮ್ಯಾಕಮೋಹನ ಎನ್ನುವರು.
13. ಭಾರತ ಮತ್ತು ಶ್ರೀಲಂಕಾವನ್ನು ಪಾಕ್ಜಲಸಂದಿ ಮತ್ತು ಮನ್ನಾರಖಾರಿ ಪ್ರತ್ಯೇಖಿಸುತ್ತವೆ.
14. ಭಾರತದ ಎರಡೂ ಪ್ರಮುಖ ದ್ವೀಪ ಸಮೂಹಗಳು ಅಂಡಮಾನ ಮತ್ತು ನಿಕೋಬಾರ-ಲಕ್ಷದ್ವೀಪ ಮತ್ತು ಮಿನಿಕಾಯ ದ್ವೀಪ ಸಮೂಹಗಳು.
15. ಸಾರ್ಕ-ಸೌತ ಏಶಿಯನ್ ಅಸೋಸಿಯೆಶನ್ ಆಪ್ ರಿಜಿನಲ್ ಕಾಪರ್ೊರೆಶನ್. ಸಪ್ತ-ದಿ ಸೌತ ಏಶಿಯನ್ ಪ್ರಿಪರೆಂಟಿಯಲ್ ಟ್ರೇಡ್ ಅಗ್ರಿಮೆಂಟ್.
16. ಇತ್ತಿಚ್ಚೆಗೆ ನಿರ್ಮಾಣಗೊಂಡ 4 ಹೊಸ ರಾಜ್ಯಗಳು. ಮದ್ಯ ಪ್ರದೇಶವನ್ನು ವಿಭಜಿಸಿ-ಚತ್ತೀಸಗರ್, ಉತ್ತರ ಪ್ರದೇಶವನ್ನು ವಿಭಜಿಸಿ-ಉತ್ತರಾಂಚಲ, ಬಿಹಾರವನ್ನು ವಿಭಜಿಸಿ-ಜಾರ್ಖಂಡ, ಆಂದ್ರ ಪ್ರದೇಶವನ್ನು ವಿಭಜಿಸಿ-ತೆಲಂಗಾಣ ರಾಜ್ಯಗಳನ್ನು ರಚನೆ ಮಾಡಲಾಗಿದೆ.
17. ಭಾರತದಲ್ಲಿ 29 ರಾಜ್ಯಗಳು ಹಾಗೂ 7 ಕೇಂದ್ರಾಡಳಿತ ಪ್ರದೇಶಗಳಿವೆ.
18. ಭಾರತದ ಅತೀ ದೊಡ್ಡ ರಾಜ್ಯ-ರಾಜ್ಯಸ್ಥಾನ ಅತೀ ಚಿಕ್ಕ ರಾಜ್ಯ-ಗೋವಾ.
19. ಭಾರತದ ಅತೀ ದೊಡ್ಡ ಕೇಂದ್ರಾಡಳಿತ ಪ್ರದೇಶ-ಅಂಡಮಾನ ಮತ್ತು ನಿಕೋಬಾರ್ ಮತ್ತು ಅತೀ ಚಿಕ್ಕ ಕೇಂದ್ರಾಡಳಿತ ಪ್ರದೇಶ-ಲಕ್ಷದ್ವೀಪ.
20. ಹೊಸದಾಗಿ ರಚನೆಯಾದ ಚತ್ತೀಸಗರ್ದ ರಾಜಧಾನಿ-ರಾಯಪುರ, ಜಾರ್ಖಂಡ ರಾಜಧಾನಿ- ರಾಂಚಿ, ಉತ್ತರಾಂಚಲದ ರಾಜದಾನಿ-ಡೆಹರಾಡೂನ್, ತೆಲಂಗಾಣದ ರಾಜಧಾನಿ-_______
21. ಭಾತರದ ಅತ್ಯಂತ ಪಶ್ಚಿಮದಲ್ಲಿರುವ ಪ್ರದೇಶ-ಗುಜರಾತ ರಾಜ್ಯ ತೀರದ ಸರ್ ಕ್ರಿಕ್ ಪ್ರದೇಶ ಮತ್ತು ಅತ್ಯಂತ ಪೂರ್ವದಲ್ಲಿರುವ ಪ್ರದೇಶ ಅರುಣಾಚಲ ಪ್ರದೇಶದ ಪೂರ್ವ ಲೋಹಿತ ಜಿಲ್ಲೆಯ ಗಡಿ ಪ್ರದೇಶ.
22. ಕೇಂದ್ರಾಡಳಿತ ಪ್ರದೇಶವಾದ ದೆಹಲಿಯ ಸೂತ್ತ-ಮೂತ್ತಲಿನ ರಾಜ್ಯಗಳ ಕೇಲವು ಜಿಲ್ಲೆಗಳ ಭಾಗಗಳನ್ನು ಸೇರಿಸಿ (ನ್ಯಾಶನಲ್ ಕ್ಯಾಪಿಟಲ್ ರಿಜನ್ ಎನ್ಸಿಆರ್) ರಾಷ್ಟ್ರೀಯ ರಾಜಧಾನಿ ಪ್ರದೇಶ ಎಂದು ಕರೆಯಲಾಗಿದೆ.
23. ಆಸಿಯಾನ್-ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ.
24. ಜಿ-4 ರಾಷ್ಟ್ರಗಳು ಭಾರತ, ಬ್ರೇಜಿಲ್, ಜರ್ಮನಿ ಮತ್ತು ಜಪಾನ್.
25. ಭಾರತ ಮತ್ತು ಶ್ರೀಲಂಕಾದ ನಡುವೆ ನಿರ್ಮಾಣಗೊಳ್ಳುತ್ತಿರುವ ಹಡಗು ಕಾಲುವೆಯನ್ನು ಸೇತು ಸಮುದ್ರ ಎನ್ನುವರ.
26. ಭಾರತವು ಬಾಂಗ್ಲಾದೇಶದೊಡನೆ ಅತೀ ಉದ್ದವಾದ ಗಡಿಯನ್ನು ಹೊಂದಿದೆ.
27. ಪಾಕ್ ಆಕ್ರಮಿತ ಕಾಶ್ಮೀರದ ಗಡಿ ಪ್ರದೇದ ರೇಖೆಯನ್ನು ನಿಯಂತ್ರಣ ರೇಖೆ ಅಥವಾ ಎಲ್ಓಸಿ (ಲೈನ್ ಆಪ್ ಕಂಟ್ರೋಲ್) ಎನ್ನುವರು.
28. ಕಾಶ್ಮೀರದ ಪಾಕ್ ಮತ್ತು ಚೈನಾ ಆಕ್ರಮಿತ ಪ್ರದೇಶಗಳನ್ನು ಪೋಕ ಎನ್ನುವರು.
29. ಭಾರತದ ನೆರೆಯ ದ್ವೀಪ ರಾಷ್ಟ್ರಗಳು- ಶ್ರೀಲಂಕಾ ಮತ್ತು ಮಾಲ್ಡಿವ್ಸ್.
30. ಭಾರತದ ಉದ್ದ-3214 ಕಿ ಮೀ ಮತ್ತು ಅಗಲ-2933 ಕಿ ಮೀ.
31. ಗುಜರಾತ ರಾಜ್ಯವು ಅತೀ ಉದ್ದವಾದ ಕರಾವಳಿ ತೀರ ಪ್ರದೇಶವನ್ನು ಹೊಂದಿದೆ.
32. ಭಾರತದ ಭೌಗೋಳಿಕ ಕೇಂದ್ರ- ಮದ್ಯಪ್ರದೇಶದ ಜಬ್ಬಲಪುರ.
33. ಭಾರತದ ಅತೀ ದೊಡ್ಡ ಜಿಲ್ಲೆ-ಗುಜರಾತನ ಕಚ್ ಹಾಗೂ ಕಾಶ್ಮೀರದ-ಲ್ಹೇ ಅತೀ ಚಿಕ್ಕ ಜಿಲ್ಲೆ-ಪಾಂಡಿಚೇರಿ
34. ಭಾರತವು 7 ರಾಷ್ಟ್ರಗಳೊಂದಿಗೆ ಭೂ ಗಡಿ ರೇಖೆಯನ್ನು ಹಾಗೂ ಶ್ರೀಲಂಕಾ ಮತ್ತು ಮಾಲ್ಡೀವ್ಸ್ಗಳೊಂದಿಗೆ ಸಾಗರ ವಲಯ ಗಡಿಯನ್ನು ಹೊಂದಿದೆ.
🌺🌺🌺🌺🌺🌺🌺🌺🌺🌺🌺
🔷Q). ಇತ್ತೀಚೆಗೆ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ರೋಜರ್ ಫೆಡರರ್ ಅವರು ಎ.ಟಿ.ಪಿ (Rank)ದರ್ಜೆಯಲ್ಲಿ ಯಾವ ಸ್ಥಾನವನ್ನು ಪಡೆದಿರುವರು?
a) 1 ನೇ ಸ್ಥಾನ
b) 2 ನೇ ಸ್ಥಾನ
c) 3 ನೇ ಸ್ಥಾನ
d) 4 ನೇ ಸ್ಥಾನ
Answer) Description:
2 ನೇ ಸ್ಥಾನ # ಇತ್ತೀಚೆಗೆ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ರೋಜರ್ ಫೆಡರರ್ ಅವರು ಒಟ್ಟು 9,605 ಪಾಯಿಟ್ಸ್ ಗಳನ್ನು ಪಡೆಯುವ ಮೂಲಕ ಎ.ಟಿ.ಪಿ (Rank)ದರ್ಜೆಯಲ್ಲಿ 2 ನೇ ಸ್ಥಾನವನ್ನು ಪಡೆದಿರುವರು.
🔷Q). ಇತ್ತೀಚೆಗೆ "ಗ್ರೀನ್ ಪೀಸ್" ಸಂಘಟನೆ ಬಿಡುಗಡೆ ಮಾಡಿರುವ ವರದಿಯಲ್ಲಿ ಕರ್ನಾಟಕದ ಎಷ್ಟು ನಗರಗಳಲ್ಲಿ ಅತಿಹೆಚ್ಚು ವಾಯುಮಾಲಿನ್ಯ ಇದೆ ಎಂದು ತಿಳಿಸಿದೆ?
a) 5 ನಗರಗಳು
b) 8 ನಗರಗಳು
c) 10 ನಗರಗಳು
d) 12 ನಗರಗಳು
Answer) Description:
10 ನಗರಗಳು # ಇತ್ತೀಚೆಗೆ "ಗ್ರೀನ್ ಪೀಸ್" ಸಂಘಟನೆ ಬಿಡುಗಡೆ ಮಾಡಿರುವ ವರದಿಯಲ್ಲಿ ಕರ್ನಾಟಕದ 10 ನಗರಗಳಲ್ಲಿ ಅತಿಹೆಚ್ಚು ವಾಯುಮಾಲಿನ್ಯ ಇದೆ ಎಂದು ತಿಳಿಸಿದೆ. # ಆ 10 ನಗರಗಳು ಯಾವುವೆಂದರೆ : ಬೆಂಗಳೂರು, ತುಮಕೂರು, ದಾವಣಗೇರಿ, ಬೀದರ್, ರಾಯಚೂರು, ಹುಬ್ಬಳ್ಳಿ, ಧಾರವಾಡ, ಕೋಲಾರ, ಕಲಬುರ್ಗಿ, ಬೆಳಗಾವಿ
🔷Q). ಇತ್ತೀಚೆಗೆ ಯಾವ ರಾಜ್ಯದ ಮುಖ್ಯಮಂತ್ರಿ ಕಾವೇರಿ ನದಿ ನೀರು ಬಿಡುಗಡೆಗೆ ಮನವಿ ಮಾಡಲು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಭೇಟಿಯಾಗಲು ಸಮಯ ನೀಡುವಂತೆ ಪತ್ರ ಬರೆದಿದ್ದಾರೆ?
a) ಪುದುಚೇರಿ
b) ಗೋವಾ
c) ತಮಿಳುನಾಡು
d) ಮಹಾರಾಷ್ಟ್ರ
Answer) Description:
ತಮಿಳುನಾಡು # ಇತ್ತೀಚೆಗೆ ತಮಿಳುನಾಡು ರಾಜ್ಯದ ಮುಖ್ಯಮಂತ್ರಿ ಪಳನಿಸ್ವಾಮಿಯವರು ಕಾವೇರಿ ನದಿ ನೀರು ಬಿಡುಗಡೆಗೆ ಮನವಿ ಮಾಡಲು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಭೇಟಿಯಾಗಲು ಸಮಯ ನೀಡುವಂತೆ ಪತ್ರ ಬರೆದಿದ್ದಾರೆ.
🔷Q). 2018 ರ ಜನೇವರಿ 31 ರಂದು ಯಾರ ಜನ್ಮ ದಿನವನ್ನಾಗಿ ಆಚರಿಸಲಾಯಿತು?
a) ಸ್ವಾಮಿ ವಿವೇಕಾನಂದ
b) ಮಹಾತ್ಮಾ ಗಾಂಧಿ
c) ದ.ರಾ ಬೇಂದ್ರೆ
d) ಕುವೆಂಪು
Answer) Description:
ದ.ರಾ ಬೇಂದ್ರೆ # 2018 ರ ಜನೇವರಿ 31 ರಂದು ಸಾಹಿತಿ ದ.ರಾ.ಬೇಂದ್ರೆಯವರ ಜನ್ಮದಿನವನ್ನು ಆಚರಿಸಲಾಯಿತು. # ಸಾಹಿತಿ ದ.ರಾ.ಬೇಂದ್ರೆಯವರು ಜನೇವರಿ 31, 1896 ರಲ್ಲಿ ಧಾರವಾಡ ಜಿಲ್ಲೆಯಲ್ಲಿ ಜನಿಸಿದರು.
🔷Q). 2018 ರ ಜನೇವರಿ 30 ರಂದು ಯಾವ ಪಕ್ಷದ ವಿಧಾನಸಭೆಯ ಸದಸ್ಯರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ತಮ್ಮ ಸದಸ್ಯತ್ವಕ್ಕೆ ವಿಧಾನಸಭಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ್ದಾರೆ?
a) ಕಾಂಗ್ರೇಸ್
b) ಬಿ.ಜೆ.ಪಿ
c) ಜೆ.ಡಿ.ಎಸ್
d) ಪಕ್ಷೇತರ
Answer) Description:
ಪಕ್ಷೇತರ # 2018 ರ ಜನೇವರಿ 30 ರಂದು ಕುಂದಾಪುರ ಕ್ಷೇತ್ರದ ಪಕ್ಷೇತರ ವಿಧಾನಸಭೆಯ ಸದಸ್ಯರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ತಮ್ಮ ಸದಸ್ಯತ್ವಕ್ಕೆ ವಿಧಾನಸಭಾಧ್ಯಕ್ಷರಾದ ಕೆ.ಬಿ.ಕೋಳಿವಾಡ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
🔷Q). ಇತ್ತೀಚೆಗೆ ಹೈಕೋರ್ಟ್ ನ್ಯಾಯಮೂರ್ತಿಗಳ ವೇತನವನ್ನು ಎಷ್ಟು ರೂಪಾಯಿಗಳಿಗೆ ಹೆಚ್ಚಿಸುವ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ?
a) 1.50 ಲಕ್ಷ ರೂ
b) 2.25 ಲಕ್ಷ ರೂ
c) 1.80 ಲಕ್ಷ ರೂ
d) 2.50 ಲಕ್ಷ ರೂ
Answer) Description:
2.25 ಲಕ್ಷ ರೂ\r\n# ಇತ್ತೀಚೆಗೆ ಹೈಕೋರ್ಟ್ ನ್ಯಾಯಮೂರ್ತಿಗಳ ವೇತನವನ್ನು 2.25 ಲಕ್ಷ ರೂಪಾಯಿಗಳಿಗೆ ಹೆಚ್ಚಿಸುವ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ.
🔷Q). ಇತ್ತೀಚೆಗೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಯವರ ವೇತನವನ್ನು ಎಷ್ಟು ರೂಪಾಯಿಗಳಿಗೆ ಹೆಚ್ಚಿಸುವ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ?
a) 1.50 ಲಕ್ಷ ರೂ
b) 1.75 ಲಕ್ಷ ಲಕ್ಷ ರೂ
c) 2.80 ಲಕ್ಷ ರೂ
d) 3.20 ಲಕ್ಷ ರೂ
Answer) Description:
2.80 ಲಕ್ಷ ರೂ # ಇತ್ತೀಚೆಗೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಯವರ ವೇತನವನ್ನು 2.80 ಲಕ್ಷ ರೂಗಳಿಗೆ ಹೆಚ್ಚಿಸುವ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. # ಸುಪ್ರೀಂಕೋರ್ಟ್ ನ್ಯಾಯಮೂರ್ತಿಯವರ ವೇತನವು 2.50 ಲಕ್ಷ ರೂಪಾಯಿಗಳಿಗೆ ಏರಲಿದೆ. # ಏಳನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಳವಾಗಿದೆ. ಈ ವೇತನ ಹೆಚ್ಚಳವು 2016ರ ಜನೇವರಿ 1 ರಿಂದ ಅನ್ವಯವಾಗಲಿದೆ.
🔷Q). . ಇತ್ತೀಚೆಗೆ ಬಿಡುಗಡೆಯಾದ "ನ್ಯೂ ವರ್ಲ್ಡ್ ವೆಲ್ತ್" ವರದಿ ಪ್ರಕಾರ ವಿಶ್ವದ ಸಿರಿವಂತ ದೇಶಗಳ ಸಾಲಿನಲ್ಲಿ ಮೊದಲ ಸ್ಥಾನವನ್ನು ಪಡೆದ ದೇಶ ಯಾವುದು?
a) ಇಂಗ್ಲೆಂಡ್.
b) ಇಟಲಿ.
c) ಚೀನಾ.
d) ಅಮೆರಿಕ.
Answer) Description:
ಅಮೆರಿಕ # ಇತ್ತೀಚೆಗೆ ಬಿಡುಗಡೆಯಾದ "ನ್ಯೂ ವರ್ಲ್ಡ್ ವೆಲ್ತ್" ವರದಿ ಪ್ರಕಾರ ವಿಶ್ವದ ಸಿರಿವಂತ ದೇಶಗಳ ಸಾಲಿನಲ್ಲಿ ಮೊದಲ ಸ್ಥಾನವನ್ನು ಪಡೆದಿದೆ. # 2017 ರಲ್ಲಿ ಗಣನೆಗೆ ತೆಗೆದುಕೊಂಡ ಸಂಪತ್ತು ಆಧರಿಸಿ ಹೇಳುವುದಾದರೆ ಅಮೆರಿಕದ ಸಂಪತ್ತು 4.197 ಲಕ್ಷ ಕೋಟಿಗಳಷ್ಟಿದೆ. # "ನ್ಯೂ ವರ್ಲ್ಡ್ ವೆಲ್ತ್" ವರದಿ ಪ್ರಕಾರ ವಿಶ್ವದ ಸಿರಿವಂತ ದೇಶಗಳ ಸಾಲಿನಲ್ಲಿ 2 ನೇ ಸ್ಥಾನ ಚೀನಾ, 3 ನೇ ಸ್ಥಾನ ಜಪಾನ್, 4 ನೇ ಸ್ಥಾನ ಇಂಗ್ಲೆಂಡ್, 5 ನೇ ಸ್ಥಾನ ಜರ್ಮನಿ, 6 ನೇ ಸ್ಥಾನ ಭಾರತ, 7 ನೇ ಸ್ಥಾನ ಪಡೆದಿತ್ತು
🔷Q). ಇತ್ತೀಚೆಗೆ ಯಾವ ಬ್ಯಾಂಕ್ ಪ್ರಾಯೋಗಿಕವಾಗಿ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳ ರೈತರಿಗೆ ಕ್ರೆಡಿಟ್ ಕಾರ್ಡ್ ವಿತರಿಸಿದೆ?
a) ವಿಜಯಾ ಬ್ಯಾಂಕ್
b) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
c) ಕಾರ್ಪೋರೇಷನ್ ಬ್ಯಾಂಕ್
d) ಐ.ಸಿ.ಐ.ಸಿ.ಐ ಬ್ಯಾಂಕ್
Answer) Description:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ # ಇತ್ತೀಚೆಗೆ ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಎಲ್ಲ ರೈತರಿಗೆ ಕ್ರೆಡಿಟ್ ಕಾರ್ಡ್ ನೀಡಲು ಮುಂದಾಗಿದೆ. ಈಗಾಗಲೇ ಪ್ರಾಯೋಗಿಕವಾಗಿ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳ ರೈತರಿಗೆ ಕ್ರೆಡಿಟ್ ಕಾರ್ಡ್ ವಿತರಿಸಿದೆ.
🔷Q). ಇತ್ತೀಚೆಗೆ ಬಿಡುಗಡೆಯಾದ "ನ್ಯೂ ವರ್ಲ್ಡ್ ವೆಲ್ತ್" ವರದಿ ಪ್ರಕಾರ ವಿಶ್ವದ ಸಿರಿವಂತ ದೇಶಗಳ ಸಾಲಿನಲ್ಲಿ ಭಾರತವು ಎಷ್ಟನೇ ಸ್ಥಾನವನ್ನು ಪಡೆದಿದೆ?
a) 4 ನೇ.
b) 6 ನೇ.
c) 7 ನೇ.
d) 8 ನೇ.
ಥಾಮಸ್ ಆಲ್ವ ಎಡಿಸನ್
ಇಂದು ನಾವೇನೇನನ್ನು ಉಪಯೋಗಿಸುತ್ತಿದ್ದೇವೋ ಅಂತಹ ಬಹುತೇಕ ವಸ್ತುಗಳಿಗೆ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಕಾರಣಕರ್ತರಾಗಿಯೂ ಹಾಗೂ ಮುಂದೆ ಬಂದ ಹಲವಾರು ಬುದ್ಧಿವಂತ ಸಾಹಸಿಗಳಿಗೆ ಪ್ರೇರಕರೂ ಆದ ಮಹಾನ್ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ನರು ಜನಿಸಿದ ದಿನ ಫೆಬ್ರುವರಿ 11. ಪರಿಶ್ರಮ, ಬುದ್ಧಿವಂತಿಕೆ, ವ್ಯವಹಾರ ಚಾತುರ್ಯ ಇವುಗಳ ಸಂಗಮವೇ ಯಶಸ್ಸು ಎನ್ನುವುದಕ್ಕೆ ಮಾದರಿ ಥಾಮಸ್ ಆಲ್ವಾ ಎಡಿಸನ್.
ಥಾಮಸ್ ಆಲ್ವಾ ಎಡಿಸನ್ ಅವರು ಕಂಡು ಹಿಡಿದಷ್ಟು ಹೊಸ ಹೊಸ ಆವಿಷ್ಕಾರಗಳನ್ನು ಇತ್ತೀಚಿನವರೆಗೆ ಯಾರೂ ಮಾಡಿರಲಿಲ್ಲ. ಅವರು ಸದಾ ಪರಿಶ್ರಮಿ. ಅವರೊಮ್ಮೆ ಘೋಷಣೆ ಮಾಡಿದ್ದರು, ‘ಪ್ರಯೋಜನವಿಲ್ಲದ್ದನ್ನು, ಲಾಭವಿಲ್ಲದ್ದನ್ನು ನಾನು ಕಂಡು ಹಿಡಿಯುವುದೇ ಇಲ್ಲ’. ಅವರ ಹೆಸರಿನಲ್ಲಿರುವಷ್ಟು ಪೇಟೆಂಟುಗಳು ಮತ್ತಾರ ಹೆಸರಿನಲ್ಲಿ ಇರಲಿಲ್ಲ.
ಎಡಿಸನ್ ತುಂಬ ಪರಿಶ್ರಮಪಟ್ಟು ವಿದ್ಯುತ್ ಬಲ್ಬನ್ನು ಕಂಡು ಹಿಡಿದರು. ಅದಕ್ಕಾಗಿ ಅವರು ಸುಮಾರು ಎರಡು ಸಾವಿರ ಪ್ರಯೋಗಗಳನ್ನು ಮಾಡಿದ್ದರಂತೆ. ಅಷ್ಟು ಪ್ರಯೋಗಗಳಾದ ಮೇಲೆ ಸಫಲತೆ ದೊರಕಿತ್ತು. ಯಾರೋ ಅವರನ್ನು ಕೇಳಿದರಂತೆ, ‘ನೀವು ಎರಡು ಸಾವಿರ ಬಾರಿ ವಿಫಲರಾದಿರಂತೆ’. ಅದಕ್ಕೆ ಎಡಿಸನ್, ‘ನಾನು ಎರಡು ಸಾವಿರ ಬಾರಿ ಸೋಲಲಿಲ್ಲ. ಯಾವ ರೀತಿ ಮಾಡಿದರೆ ಬಲ್ಬನ್ನು ಮಾಡುವುದು ಸಾಧ್ಯವಿಲ್ಲ ಎಂಬುದನ್ನು ದಾಖಲಿಸಿ ಇಟ್ಟಿದ್ದೇನೆ’ ಎಂದರಂತೆ. ಇದು ಅವರ ಸಕಾರಾತ್ಮಕತೆಯ ಪ್ರತೀಕ.
ಬಲ್ಬನ್ನೇನೋ ಕಂಡು ಹಿಡಿದಿದ್ದಾಯಿತು. ಅದರ ತಯಾರಿಕೆ ಪ್ರಾರಂಭವಾಯಿತು. ಫ್ಯಾಕ್ಟರಿ ಶುರುವಾಗಿ ಬಲ್ಬುಗಳು ಮಾರುಕಟ್ಟೆಗೆ ಬರತೊಡಗಿದವು. ಎಡಿಸನ್ ಲೆಕ್ಕ ಹಾಕಿದರು. ಒಂದು ಬಲ್ಬು ತಯಾರಾಗಲು ಒಂದು ಡಾಲರ್ ಖರ್ಚಾಗುತ್ತಿತ್ತು. ಆದರೆ ಎಡಿಸನ್ ಬಲ್ಬನ್ನು ನಲವತ್ತು ಸೆಂಟಿಗೆ ಮಾರತೊಡಗಿದರು. ಅಂದರೆ ಪ್ರತಿಯೊಂದು ಬಲ್ಬಿನಿಂದಲೂ ಅರವತ್ತು ಸೆಂಟು ನಷ್ಟವಾಗುತ್ತಿತ್ತು. ಕಂಪೆನಿಯ ಜನ ಎಡಿಸನ್‌ರಿಗೆ ಬುದ್ಧಿ ಹೇಳಿ ಬೆಲೆಯನ್ನು ಒಂದು ಡಾಲರನ್ನಾದರೂ ಇಡಲು ಹೇಳಿದರು. ಆದರೆ ಅವರು ಕೇಳಲಿಲ್ಲ. ನಂತರ ಮತ್ತೆ ಬ್ಯಾಂಕಿಗೆ ಹೋಗಿ ಸಾಲ ಪಡೆದು ಮತ್ತಷ್ಟು ಹೆಚ್ಚು ಬಲ್ಬುಗಳನ್ನು ತಯಾರಿಸಿದರು. ತಯಾರಿಕೆ ಹೆಚ್ಚಾದ್ದರಿಂದ ಪ್ರತಿ ಬಲ್ಬಿನ ತಯಾರಿಕಾ ವೆಚ್ಚ ಕಡಿಮೆಯಾಗಿ ಅರವತ್ತು ಸೆಂಟಯಿತು. ಆದರೂ ಎಡಿಸನ್ ಅವುಗಳನ್ನು ನಲವತ್ತು ಸೆಂಟಿಗೇ ಮಾರತೊಡಗಿದರು.
ಈಗ ಬೃಹತ್ ಪ್ರಮಾಣದಲ್ಲಿ ಬಲ್ಬು ತಯಾರಿಸಲು ಮತ್ತೆ ಬ್ಯಾಂಕಿಗೆ ಸಾಲಕ್ಕಾಗಿ ಹೋದರು. ಅವರು ಇವನಿಗೆ ಸಾಲ ಕೊಡಲು ಸಾಧ್ಯವಿಲ್ಲವೆಂದರು, ‘ನಿಮಗೇನಾದರೂ ವ್ಯವಹಾರ ಜ್ಞಾನ ಇದೆಯಾ? ತಯಾರಿಕೆಯ ವೆಚ್ಚ ಒಂದು ಡಾಲರ್ ಇದ್ದಾಗ ನೀವು ನಲವತ್ತು ಸೆಂಟಿಗೆ ಮಾರಿದಿರಿ. ನಂತರ ತಯಾರಿಕೆ ವೆಚ್ಚ ಅರವತ್ತು ಸೆಂಟ್ ಆದಾಗಲೂ ನಲವತ್ತಕ್ಕೇ ಮಾರುತ್ತಿದ್ದೀರಿ. ನೀವು ದಿವಾಳಿಯಾಗಲೇಬೇಕು ಎಂದು ಹಟ ತೊಟ್ಟಂತೆ ಕಾಣುತ್ತದೆ. ಇಂಥ ಕಂಪೆನಿಗೆ ನಾವು ಧನಸಹಾಯ ಮಾಡಲಾರೆವು’ ಎಂದು ಖಡಾಖಂಡಿತವಾಗಿ ಹೇಳಿದರು. ಎಡಿಸನ್ ಬಿಟ್ಟಾರೆಯೇ? ಅವರೊಂದಿಗೆ ವಾದ ಮಾಡಿದರು, ಬೇಡಿಕೊಂಡರು. ತನ್ನ ಕಾರ್ಖಾನೆಯನ್ನೇ ಒತ್ತೆ ಇಡುವುದಾಗಿ ಹೇಳಿದರು. ಅವರೂ ಒಪ್ಪಿ ಸಾಲ ನೀಡಿದರು.
ಈ ಬಾರಿ ಲಕ್ಷಾಂತರ ಬಲ್ಬುಗಳನ್ನು ತಯಾರಿಸಿದರು. ಈಗ ಬಲ್ಬಿನ ತಯಾರಿಕಾ ವೆಚ್ಚ ಇಪ್ಪತ್ತು ಸೆಂಟಾಯಿತು. ಆದರೂ ಎಡಿಸನ್ ನಲವತ್ತು ಸೆಂಟಿಗೇ ಮಾರಿದರು. ಅವರಿಗೆ ಎಷ್ಟು ಲಾಭ ಬಂತೆಂದರೆ ಹಿಂದಿನ ನಷ್ಟವೆಲ್ಲ ಕೊಚ್ಚಿಹೋಯಿತು.
ಜನ ಬೆರಗಾದರು, ಅದು ಏಕೆ ಮೊದಲು ಹಾಗೆ ನಷ್ಟದಲ್ಲಿ ಮಾರಿದಿರಿ ಎಂದು ಕೇಳಿದಾಗ ಎಡಿಸನ್ ಹೇಳಿದರು, ‘ಮೊದಲಿಗೇ ನಾನು ಬೆಲೆ ಹೆಚ್ಚಿಗಿಟ್ಟಿದ್ದರೆ ಬಹಳ ಜನ ಕೊಂಡುಕೊಳ್ಳುತ್ತಿರಲಿಲ್ಲ. ಅವರಿಗೆ ವಿದ್ಯುತ್ ಬಲ್ಬಿನ ಉಪಯುಕ್ತತೆಯ ಅರಿವಾದರೆ ಅವರು ಅದನ್ನು ಬಿಟ್ಟಿರುವುದು ಸಾಧ್ಯವಿಲ್ಲ. ಆಗ ನಾನು ಬೆಲೆ ಹೆಚ್ಚು ಮಾಡಿದರೂ ಯಾರೂ ಗೊಣಗದೇ ಕೊಂಡುಕೊಳ್ಳುತ್ತಾರೆ.’ ಇದು ಎಡಿಸನ್‌ರ ವ್ಯವಹಾರ ಚತುರತೆ. ಆಗ ಎಡಿಸನ್ನರು ಸ್ಥಾಪಿಸಿದ ಜನರಲ್ ಎಲೆಕ್ಟ್ರಿಕ್ ಕಂಪೆನಿ ಇಂದು ಪ್ರಪಂಚದಾದ್ಯಂತ ಅನೇಕ ಸಹಸ್ರ ಕೋಟಿ ಡಾಲರ್‌ಗಳ ವ್ಯವಹಾರ ನಡೆಸುತ್ತಿದೆ.
ಪರಿಶ್ರಮ, ಬುದ್ಧಿವಂತಿಕೆ, ವ್ಯವಹಾರ ಚಾತುರ್ಯ ಇವುಗಳ ಸಂಗಮವೇ ಯಶಸ್ಸು ಎನ್ನುವುದಕ್ಕೆ ಮಾದರಿ ಥಾಮಸ್ ಆಲ್ವಾ ಎಡಿಸನ್.
ಥಾಮಸ್ ಆಲ್ವ ಎಡಿಸನ್ ಗ್ರಾಮಫೋನ್, ವಿದ್ಯುದ್ದೀಪ, ಕೈನಟೊಸ್ಕೋಪ್, ಸಂಚಯನ ವಿದ್ಯುತ್ಕೋಶ, ಕಬ್ಬಿಣ ಅದುರು ಬೇರ್ಪಡಿಸುವ ಕಾಂತೀಯ ಸಲ
0 Comments