Ticker

6/recent/ticker-posts

ಸಾಮಾನ್ಯ ಜ್ಞಾನ ಪ್ರಶ್ನೋತ್ತರ 🌾🌾👌👌💐💐

ಸಾಮಾನ್ಯ ಜ್ಞಾನ ಪ್ರಶ್ನೋತ್ತರ
🌾🌾👌👌💐💐

Kannada general knowledge question answers




1) ಪೂರ್ವಾಭಿಮುಖವಾಗಿ ಹರಿಯುವ ನದಿಗಳನ್ನು ಹೆಸರಿಸಿ?
☛1) ಘಟಪ್ರಭಾ.
   2) ಮಲಪ್ರಭಾ.
   3) ಭೀಮಾ.
   4) ತುಂಗಭದ್ರಾ.
   5) ಡೋಣಿ.
               - ಮುಂತಾದವು.

2) ಮಹಾರಾಷ್ಟ್ರದ "ಭೀಮಾಶಂಕರ್" ಬಳಿಯಲ್ಲಿ ಉಗಮವಾಗುವ ನದಿ ಯಾವುದು?
☛ಭೀಮಾನದಿ.



3) "ಉತ್ತರ ಪಿನಾಕಿನಿ ನದಿ"ಯ ಮತ್ತೊಂದು ಹೆಸರೇನು?
☛ಪೆನ್ನಾರ್.

4) "ಛಾಯಾ ಭಗವತಿ" ಜಲಪಾತವನ್ನು ನಿರ್ಮಿಸುವ ನದಿ ಯಾವುದು?
☛ಡೋಣಿ.

5) ಹಿರಣ್ಯಕೇಶಿ & ಮಾರ್ಕಂಡೇಯ ಇವು ಯಾವ ನದಿಯ ಉಪನದಿಗಳು?
☛ಘಟಪ್ರಭಾ.

6) ರಾಣೆಬೆನ್ನೂರಿನ ಬಳಿ ಯಾವ ನದಿಯು ತುಂಗಭದ್ರಾ ನದಿಯನ್ನು ಸೇರುವುದು?
☛ಕುಮುದ್ವತಿ.

7) "ನವಿಲುತಿರ್ಥ"ವೆಂದು ಯಾವ ನದಿಯನ್ನು ಕರೆಯುವರು?
☛ಮಲಪ್ರಭಾ.

8) "ಗೋಕಾಕ್ ಜಲಪಾತ"ವನ್ನು ಉಂಟು ಮಾಡುವ ನದಿ ಯಾವುದು?
☛ಘಟಪ್ರಭಾ.

9) ವೇದಾವತಿ & ಹಗರಿ ಯಾವ ನದಿಯ ಉಪನದಿಗಳು?
☛ತುಂಗಭದ್ರಾ.

10) ಘಟಪ್ರಭಾ ನದಿಯ ಉಗಮ ಸ್ಥಳ ಯಾವುದು?
☛ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಪಶ್ಚಿಮಘಟ್ಟ.

11) ಬಾದಾಮಿ ಯಾವ ನದಿಯ ಎಡದಂಡೆಗೆ ಸಮೀಪದಲ್ಲಿದೆ?
☛ಮಲಪ್ರಭಾ.

12) ಗುಲ್ಬರ್ಗಾ ಜಿಲ್ಲೆಯ ಜಪಾಲಪುರದ ಬಳಿ ಡೋಣಿ ಯಾವ ನದಿಯನ್ನು ಸೇರುವುದು?
☛ಕೃಷ್ಣಾ.

13) ಮಲಪ್ರಭಾ ನದಿಯ ಉಗಮ ಸ್ಥಳ ಯಾವುದು?
☛ಕನಕುಂಬಿ.

14) ಕನಕುಂಬಿ ಬೆಳಗಾವಿ ಜಿಲ್ಲೆಯ ಯಾವ ತಾಲ್ಲೂಕಿನಲ್ಲಿದೆ?
☛ಖಾನಾಪುರ.

15) ಯಾವ ನದಿಗೆ "ಪಂಪಸಾಗರ" ಜಲಾಶಯ ನಿರ್ಮಿಸಲಾಗಿದೆ?
☛ತುಂಗಭದ್ರಾ.

16) ಮಹಾರಾಷ್ಟ್ರದ ದತ್ತಪಟ್ಟಣದ ಬಳಿ ಹುಟ್ಟುವ ನದಿ ಯಾವುದು?
☛ಡೋಣಿ.

17) ಬೆಣ್ಣೆ ಹಳ್ಳ & ಹಿರೇ ಹಳ್ಳ ಯಾವ ನದಿಯ ಉಪನದಿಗಳು?
☛ಮಲಪ್ರಭಾ.

18) ತುಂಗಾಭದ್ರಾ ನದಿಯು ಆಂಧ್ರಪ್ರದೇಶದ ಯಾವ ಸ್ಥಳದಲ್ಲಿ ಕೃಷ್ಣಾ ನದಿಯನ್ನು ಸೇರುತ್ತದೆ?
☛ಕರ್ನೂಲ್ ಬಳಿ ಆಲಂಪುರದಲ್ಲಿ.

19) ಇತಿಹಾಸ ಪ್ರಸಿದ್ಧ ಪಟ್ಟದಕಲ್ಲು & ಐಹೋಳೆ ಯಾವ ನದಿಯ ಬಲದಂಡೆಗೆ ಇವೆ?
☛ಮಲಪ್ರಭಾ.

20) ಶಿವಮೊಗ್ಗದ ಮೂಲಕ ಹರಿದು ಬರುವ "ವರದಾನದಿಯು" ಬಿಲ್ವಿಗಿಯ ಬಳಿ ಯಾವ ನದಿಯನ್ನು ಸೇರುವುದು?
☛ತುಂಗಭದ್ರಾ.

21) ವರದಾ & ಕುಮದ್ವತಿ ಯಾವ ನದಿಯ ಉಪನದಿಗಳು?
☛ತುಂಗಭದ್ರಾ.

22) ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳನ್ನು ಹೆಸರಿಸಿ?
 ☛ 1) ಕಾಳಿ.
  2) ಶರಾವತಿ.
  3) ನೇತ್ರಾವತಿ.
  4) ಬೇಡ್ತಿ.
  5) ಅಘನಾಶಿನಿ.
  6) ವಾರಾಹಿ.
  7) ಮಹಾದಾಯಿ.
               --- ಮುಂತಾದವು.

23) "ಬಾರಪೊಳೆ ನದಿ"ಯು ಯಾವ ಎರಡು ರಾಜ್ಯಗಳಲ್ಲಿ ಹರಿಯುತ್ತದೆ?
☛ಕರ್ನಾಟಕ & ಕೇರಳ.

24) "ಮಾಗೋಡು ಜಲಪಾತ"ವನ್ನು ಉಂಟುಮಾಡುವ ನದಿ ಯಾವುದು?
☛ ಬೇಡ್ತಿ.

25) ಬೇಡ್ತಿ ನದಿಯ ಮತ್ತೊಂದು ಹೆಸರೇನು?
☛ಗಂಗಾವಳಿ.

26) ಕಾಳಿ ನದಿಯ ಉಗಮ ಸ್ಥಳ ಯಾವುದು?
☛ಉತ್ತರಕನ್ನಡ ಜಿಲ್ಲೆಯ ಸೂಪಾ ತಾಲ್ಲೂಕಿನ ಡಿಗ್ಗಿಘಾಟಿನಲ್ಲಿ.

27) "ಭಂಡಾಜೆ ಜಲಪಾತ"ವನ್ನು ಉಂಟುಮಾಡುವ ನದಿ ಯಾವುದು?
☛ನೇತ್ರಾವತಿ.

28) ಹರಿದ್ರಾತಿ & ಎಣ್ಣೆ ಹೊಳಿ ಇವು ಯಾವ ನದಿಯ ಪ್ರಮುಖ ಉಪನದಿಗಳು?
☛ಶರಾವತಿ.

29) ಶರಾವತಿ ನದಿಯ ಉಗಮಸ್ಥಳ ಯಾವುದು?
☛ಶಿವಮೊಗ್ಗ ಜಿಲ್ಲೆಯ ತಿರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥ.

30) ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಲ್ಲಿ ಉದ್ದವಾದ ನದಿ ಯಾವುದು?
☛ಕಾಳಿನದಿ.

31) "ಉಂಚಳ್ಳಿ ಜಲಪಾತ"ವನ್ನು ನಿರ್ಮಿಸುವ ನದಿ ಯಾವುದು?
☛ಅಘನಾಶಿನಿ.

32) ಭೂಗರ್ಭದಲ್ಲಿ ವಿದ್ಯುತ್ ಉತ್ಪಾದನೆಯನ್ನು ಆರಂಭಿಸಿರುವ ಏಕೈಕ ನದಿ ಯಾವುದು?
☛ವರಾಹಿ ನದಿ.

33) ನೇತ್ರಾವತಿ ನದಿಯ ಉಗಮಸ್ಥಳ ಯಾವುದು?
☛ಚಿಕ್ಕಮಗಳೂರು ಜಿಲ್ಲೆಯ ಬಲ್ಲಾಳರಾಯನದುರ್ಗದ ಬಳಿ.

34) "ಲಾಲಗುಳಿ ಜಲಪಾತ''ವನ್ನು ಉಂಟು ಮಾಡುವ ನದಿ ಯಾವುದು?
☛ಕಾಳಿ ನದಿ.

35) ಕಳಸ & ಬಂಡೂರಿ ಯಾವ ನದಿಯ ಉಪನದಿಗಳು?
☛ಮಹದಾಯಿ.

36) ಶಿವಗಂಗೆ & ಇಳಿಮನೆ ಜಲಪಾತಗಳನ್ನು ಉಂಟುಮಾಡುವ ನದಿ ಯಾವುದು?
☛ಅಘನಾಶಿನಿ.

37) ಗುರುಪುರ & ಕುಮಾರಧಾರ ಯಾವ ನದಿಯ ಉಪನದಿಗಳು?
☛ನೇತ್ರಾವತಿ.

38) ಮಹದಾಯಿ ನದಿಯು ಗೋವಾದಲ್ಲಿ ಯಾವ ಹೆಸರಿನಿಂದ ಹರಿಯುವುದು?
☛ಮಾಂಡೋವಿ.

39) ಜಗತ್ಪ್ರಸಿದ್ಧ "ಜೋಗ್ ಜಲಪಾತ"ವನ್ನು ಸೃಷ್ಟಿಸಿದ ನದಿ ಯಾವುದು?
☛ಶರಾವತಿ.

40) "ಕಪ್ಪುಕಾಳಿ" ಎಂದು ಯಾವ ನದಿಯನ್ನು ಕರೆಯುತ್ತಾರೆ?
☛ಕಾಳಿ.

41) "ಪಣಜಿ" ಯಾವ ನದಿಯ ತೀರದಲ್ಲಿದೆ?
☛ಮಹದಾಯಿ.

42) ತಟ್ಟಿಹಳ್ಳ & ಪಂಡ್ರಿ ಯಾವ ನದಿಯ ಉಪನದಿಗಳು?
☛ ಕಾಳಿನದಿ.

43) ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ದೇವಾಂಗ ಎಂಬಲ್ಲಿ ಉಗಮವಾಗುವ ನದಿ ಯಾವುದು?
☛ ಮಹದಾಯಿ.

44) ಚಾರ್ಮುಡಿ, ಶಿಶಿಲ & ಪಾಲ್ಗುಣಿ ಯಾವ ನದಿಯ ಉಪನದಿಗಳು?
☛ನೇತ್ರಾವತಿ.

45) ಕನೇರಿ, ವಾಕಿ & ಇವು ಯಾವ ನದಿಯ ಉಪನದಿಗಳು?
☛ಕಾಳಿನದಿ

Post a Comment

0 Comments