Ticker

6/recent/ticker-posts

Kannada general knowledge question answers part 16

1) ಯಾವ ಸಾಮ್ರಾಜ್ಯದ ಪಾಲಿಗೆ 18 ನೆಯ
ಶತಮಾನದ ಮೊದಲಾರ್ಧವು ಮಹಾಪತನದ
ಕಾಲವಾಗಿತ್ತು?

* ಮೊಘಲ್ ಸಾಮ್ರಾಜ್ಯದ.

2) ವಾಸ್ಕೋಡಿಗಾಮ ಯಾವ ದೇಶದ ನಾವಿಕ?

* ಪೋರ್ಚುಗೀಸ್.

3) ಬ್ರಿಟಿಷ್ ಭಾರತದ ಸೃಷ್ಠಿಗೆ ಕಾರಣನಾದ
ಪ್ರಥಮ ಅಧಿಕಾರಿ ಯಾರು?

* ರಾಬರ್ಟ್ ಕ್ಲೈವ್.



4) ದಿವಾನಿ ಹಕ್ಕು ಎಂದರೆ ------.

* ಭೂಕಂದಾಯ ವಸೂಲಿ ಮಾಡುವ ಹಕ್ಕು.

5) ರಾಬರ್ಟ್ ಕ್ಲೈವ್ ದ್ವಿ-ಸರ್ಕಾರವನ್ನು ಎಲ್ಲಿ
ಜಾರಿಗೆ ತಂದನು?

* ಬಂಗಾಳದಲ್ಲಿ.

6) ಈಸ್ಟ್ ಇಂಡಿಯಾ ಕಂಪನಿಯನ್ನು ಯಾವಾಗ
ಸ್ಥಾಪಿಸಲಾಯಿತು?

* 1600 ರಲ್ಲಿ.

7) ಈಸ್ಟ್ ಇಂಡಿಯಾ ಕಂಪನಿಯನ್ನು ಎಲ್ಲಿ
ಸ್ಥಾಪಿಸಲಾಯಿತು?

* ಇಂಗ್ಲೆಂಡ್ ನಲ್ಲಿ.

8) 1781 ರಲ್ಲಿ ಯಾರ ನೇತೃತ್ವದಲ್ಲಿ
ಇಂಗ್ಲೀಷ್ ಸೈನ್ಯವು ಹೈದರಾಲಿಯನ್ನು
ಯುದ್ಧದಲ್ಲಿ ಸೋಲಿಸಿತು?

* ಸರ್ ಐರ್ ಕೂಟ್ ನ.

9) ಶ್ರೀರಂಗಪಟ್ಟಣ ಒಪ್ಪಂದವಾದದ್ದು
ಯಾವಾಗ?

* 1792 ರಲ್ಲಿ.

10) ಯಾವ ಒಡೆಯರ ಕಾಲದಲ್ಲಿ ಮೈಸೂರು
ರಾಜ್ಯವು ರಾಮರಾಜ್ಯ ಎಂಬ ಕೀರ್ತಿಗೆ
ಪಾತ್ರವಾಯಿತು?

* ನಾಲ್ವಡಿ ಕೃಷ್ಣರಾಜ ಒಡೆಯರ್.

11) "ಹಲಗಲಿ" ಬಾಗಲಕೋಟೆ ಜಿಲ್ಲೆಯ ಯಾವ
ತಾಲ್ಲೂಕಿನಲ್ಲಿದೆ?

* ಮುಧೋಳ.

12) 1836 ರಲ್ಲಿ ----- ದಿಂದ
ಬೆಳಗಾವಿಯನ್ನು ಬೇರ್ಪಡಿಸಲಾಯಿತು?

* ಧಾರವಾಡ.

13) ಕನ್ನಡ ಮಾತನಾಡುವ ಬಳ್ಳಾರಿ,
ದಕ್ಷಿಣಕನ್ನಡ ಪ್ರದೇಶಗಳು 19 ನೇ
ಶತಮಾನದಲ್ಲಿ ಯಾವ ಪ್ರಾಂತದ ಆಳ್ವಿಕೆಗೆ
ಒಳಪಟ್ಟಿದ್ದವು?

* ಮದ್ರಾಸ್.

14) ಸುಮಾರು 8 ಶತಮಾನಗಳ ಕಾಲ
ಕೊಡಗನ್ನು ಆಳ್ವಿಕೆ ಮಾಡಿದವರು ಯಾರು?

* ಚೆಂಗಾಳ್ವರು.

15) ಯಾವ ಶಾಸನ ಜಾರಿಗೆ ಬರುವುದರ
ಮೂಲಕ ದ್ವಿಮುಖ ಸರ್ಕಾರ ರದ್ದಾಯಿತು?

* 1773 ರ ರೆಗ್ಯುಲೇಟಿಂಗ್ ಶಾಸನ.

16) ಭಾರತದ ಮೊದಲನೆಯ ಗವರ್ನರ್ ಜನರಲ್
ಯಾರು?

* ವಾರನ್ ಹೆಸ್ಟಿಂಗ್ಸ್.

17) ಪಿಟ್ಸ್ ಇಂಡಿಯಾ ಶಾಸನ ಜಾರಿಗೆ
ಬಂದದ್ದು ಯಾವಾಗ?

* 1784 ರಲ್ಲಿ.

18) ಭಾರತದ ಇತಿಹಾಸದಲ್ಲಿ ಯಾವ
ಶತಮಾನವನ್ನು "ಭಾರತೀಯ ನವೋದಯ"
ಕಾಲವೆಂದು ಕರೆಯಲಾಗಿದೆ?

* 19 ನೇ.

19) "ವೇದಗಳಿಗೆ ಹಿಂದಿರುಗಿ" ಎನ್ನುವ ಘೋಷಣೆ
ಮಾಡಿದವರು ಯಾರು?

* ಸ್ವಾಮಿ ದಯಾನಂದ ಸರಸ್ವತಿ.

20) ಜ್ಯೋತಿಬಾ ಪುಲೇಯವರು ಯಾವ
ಸಮಾಜವನ್ನು ಸ್ಥಾಪಿಸಿದರು?

* ಸತ್ಯಶೋಧಕ ಸಮಾಜ.

21) "ಪ್ರಾರ್ಥನಾ ಸಮಾಜ"ವನ್ನು
ಆತ್ಮಾರಾಂ ಪಾಂಡುರಂಗರವರು ಎಲ್ಲಿ
ಸ್ಥಾಪಿಸಿದರು?

* ಮುಂಬೈನಲ್ಲಿ.

22) "ಶುದ್ಧಿ ಚಳುವಳಿ"ಯನ್ನು
ಪ್ರಾರಂಭಿಸಿದವರು ಯಾರು?

* ಸ್ವಾಮಿ ದಯಾನಂದ ಸರಸ್ವತಿ.

23) ಪುಲೇಯವರು ಶೋಷಣೆಯ ಬಗ್ಗೆ ಯಾವ
ಪುಸ್ತಕದಲ್ಲಿ ತಿಳಿಸಿದ್ದಾರೆ?

* ಗುಲಾಮಗಿರಿ.

24) ರಾಮಕೃಷ್ಣ ಪರಮಹಂಸರು
ದಕ್ಷಿಣೇಶ್ವರದಲ್ಲಿನ ಯಾವ ದೇವಾಲಯದ
ಅರ್ಚಕರಾಗಿದ್ದರು?

* ಕಾಳಿ.

25) ರಾಮಕೃಷ್ಣ ಮಿಷನ್ ನ್ನು ಸ್ಥಾಪಿಸಿದವರು
ಯಾರು?

* ಸ್ವಾಮಿ ವಿವೇಕಾನಂದರು.

26) ಸ್ವಾಮಿ ವಿವೇಕಾನಂದರು ಚಿಕಾಗೋ
ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ್ದು
ಯಾವಾಗ?

* 1893 ರಲ್ಲಿ.

27) ಥಿಯಾಸಾಫಿಕಲ್ ಸೊಸೈಟಿಯ ಮೂಲ
ಸ್ಥಾಪಕರು ಯಾರಾರು?

* ಮ್ಯಾಡಮ್ ಬ್ಲಾವಟಿಸ್ಕಿ ಮತ್ತು ಕರ್ನಲ್
ಎಚ್. ಎಸ್.ಅಲ್ಕಾಟ್.

28) 1916 ರಲ್ಲಿ ಹೋಂರೂಲ್
ಚಳುವಳಿಯನ್ನು ಪ್ರಾರಂಭಿಸಿದವರು ಯಾರು?
* ಆನಿ ಬೆಸೆಂಟ್.

29) ಕಾನ್ಪುರ್ ದಲ್ಲಿ ಸಿಡಿದೆದ್ದವನು ಯಾರು?

* ನಾನಾ ಸಾಹೇಬ್.

30) ಝಾನ್ಸೀಯಲ್ಲಿ ಯಾರ ನಾಯಕತ್ವದಲ್ಲಿ
ದಂಗೆ ಉಂಟಾಯಿತು?

* ರಾಣಿ ಲಕ್ಷ್ಮೀ ಬಾಯಿ.

31) 'ನಾನಾ ಸಾಹೇಬ್'ನ ಸಹಾಯಕ ಯಾರು?
* ತಾತ್ಯಾಟೋಪೆ.

32) ಬ್ರಿಟನ್ ರಾಣಿಯು ಘೋಷಣೆ ಹೊರಡಿಸಿದ್ದು
ಯಾವಾಗ?

* 1858 ರಲ್ಲಿ.

33) "ಟೈಮ್ಸ್ ಆಫ್ ಇಂಡಿಯಾ" ಪ್ರಕಟಗೊಂಡ
ಸ್ಥಳ ಯಾವುದು?

* ಮುಂಬೈ.

34) "ಸೋಮೆ ಪ್ರಕಾಶ" ಎಂಬ ಬಂಗಾಳ
ಪತ್ರಿಕೆಯ ಸಂಪಾದಕರು ಯಾರು?

* ಈಶ್ವರಚಂದ್ರವಿದ್ಯಾಸಾಗರ.

35) "ದಿ ಬೆಂಗಾಲ್ ಗೆಜೆಟ್" ಆರಂಭಿಸಿದವರು
ಯಾರು?

* ಆಗಸ್ಟ್ ಹಿಕಿ.

36) "ಇಲ್ಬರ್ಟ್ ಮಸೂದೆ"ಯನ್ನು ಜಾರಿಗೆ
ತಂದವನು ಯಾರು?

* ಲಾರ್ಡ್ ರಿಪ್ಪನ್.

37) ಬಂಗಾಳದ ವಿಭಜನೆಯನ್ನು ಬ್ರಿಟಿಷ್
ಸರ್ಕಾರವು ಹಿಂಪಡೆದದ್ದು ಯಾವಾಗ?

* 1911 ರಲ್ಲಿ.

38) "ವರ್ತಮಾನ ರಣನೀತಿ" ಪುಸ್ತಕದ ಕರ್ತೃ
ಯಾರು?

* ಅರವಿಂದ್ ಘೋಷ್.

39) "ಹಿಂದ್ ಸ್ವರಾಜ್" ಪತ್ರಿಕೆಯ ಸಂಪಾದಕರು
ಯಾರು?

* ಮಹಾತ್ಮ ಗಾಂಧೀಜಿ.

40) 1919 ರ ರೌಲತ್ ಕಾಯ್ದೆಯು ಯಾವ
ತಿಂಗಳಲ್ಲಿ ಜಾರಿಗೆ ಬಂದಿತು?

* ಫೆಬ್ರವರಿ.

41) "ಗಾಂಧಿಯುಗದ" ಅವಧಿಯನ್ನು ತಿಳಿಸಿರಿ?

* 1920-1947.

42) "ಸ್ವರಾಜ್ ಪಕ್ಷ" ಸ್ಥಾಪನೆಯಾದದ್ದು
ಯಾವಾಗ?

* 1922 ರಲ್ಲಿ.

43) "ಕ್ವಿಟ್ ಇಂಡಿಯಾ ಚಳುವಳಿ" ನಡೆದದ್ದು
ಯಾವಾಗ?

* 1942 ರಲ್ಲಿ.

44) ಕಾರ್ಮಿಕರ ಹೋರಾಟವು 1827 ರಲ್ಲಿ
ಎಲ್ಲಿ ಆರಂಭವಾಯಿತು?

* ಕಲ್ಕತ್ತಾದಲ್ಲಿ.

45) ಬ್ರಿಟಿಷರು ಜಾರಿಗೆ ತಂದ ಖಾಯಂ
ಜಮೀನ್ದಾರಿ ಪದ್ದತಿಯಿಂದ ಯಾವ ಬುಡಕಟ್ಟು
ಜನರು ನಿರ್ಗತಿಕರಾದರು?

* ಸಂತಾಲ.

46) 1938 ರ ಕಾಂಗ್ರೆಸ್ ಅಧಿವೇಶನ ಎಲ್ಲಿ
ನಡೆಯಿತು?

* ತ್ರಿಪುರದಲ್ಲಿ.

47) "ಫಾರ್ವರ್ಡ್ ಬ್ಲಾಕ್" ಎಂಬುವದೊಂದು
-----.
* ಹೊಸ ಪಕ್ಷ.

48) "ಫಾರ್ವರ್ಡ್ ಬ್ಲಾಕ್" ಎಂಬ ಹೊಸ ಪಕ್ಷ
ಕಟ್ಟಿದವರು ಯಾರು?

* ಸುಭಾಷ್ ಚಂದ್ರಬೋಸ್.

49) "ದೆಹಲಿ ಚಲೋ"ಗೆ ಕರೆ ನೀಡಿದವರು
ಯಾರು?

* ಸುಭಾಷ್ ಚಂದ್ರಬೋಸ್.

50) 'ಮಹದ್' ಮತ್ತು 'ಕಾಲಾರಾಂ'
ದೇವಾಲಯ ಚಳುವಳಿಗಳನ್ನು ಆರಂಭಿಸಿದವರು
ಯಾರು?

* ಡಾ.ಬಿ.ಆರ್.ಅಂಬೇಡ್ಕರ್.

Post a Comment

0 Comments