Ticker

6/recent/ticker-posts

Kannada general knowledge question answers 5

1) ಇಲ್ಬರ್ಟ್ ಮಸೂದೆಯನ್ನು ಜಾರಿಗೆ ತಂದು, ಏಕರೂಪ ಕಾನೂನು ವ್ಯವಸ್ಥೆಗೆ ದಾರಿ ಮಾಡಿಕೊಟ್ಟವನು ಯಾರು?
- ಲಾರ್ಡ್ ರಿಪ್ಪನ್. (ಭಾರತದ ಸ್ಥಳೀಯ ಸರ್ಕಾರಗಳ ಪಿತಾಮಹ).



2) ಅಫ್ಘ್ಹಾನಿಸ್ತಾನದ ರಾಜಧಾನಿ ಯಾವುದು ಹಾಗೂ ಅದರ ಪ್ರಸ್ತುತ ಅಧ್ಯಕ್ಷರು ಯಾರು?
- ಕಾಬೂಲ್, ಅಶ್ರಫ್ ಘನಿ.

3) 12 ನೇ ಸಾರ್ಕ್ ಸಮ್ಮೇಳನ ಎಲ್ಲಿ ನಡೆಯಿತು ಹಾಗೂ ಅದರಲ್ಲಿ ಭಾಗವಹಿಸಿದ ಭಾರತದ ಪ್ರಧಾನಿ ಯಾರು?
- ಇಸ್ಲಾಮಾಬಾದ್ (ಪಾಕಿಸ್ತಾನ), ಅಟಲ್ ಬಿಹಾರಿ ವಾಜಪೇಯಿ. ( 2004 ರಲ್ಲಿ).

4) ಡಿಸೆಂಬರ್ 22 ರಂದು ಯಾರ ಜನ್ಮ ದಿನಾಚರಣೆ ಆಚರಿಸಲಾಗುತ್ತದೆ ಹಾಗೂ ಆ ದಿನದ ವಿಶೇಷತೆಯೇನು?
- ಶ್ರೀನಿವಾಸ ರಾಮಾನುಜಂ (ಗಣಿತ ತಜ್ಞ), ಗಣಿತಶಾಸ್ತ್ರ ದಿನ.

5) 2011 ರ ಜನಗಣತಿಯ ಪ್ರಕಾರ ಭಾರತದಲ್ಲಿರುವ ಲೈಗಿಂಕ ಅಲ್ಪಸಂಖ್ಯಾತರು ಎಷ್ಟು?
- 4.90 ಲಕ್ಷ.

6) "ಎ ಸ್ಯೂಟೆಬಲ್ ಬಾಯ್" ಕೃತಿಯ ಕರ್ತೃ ಯಾರು?
- ವಿಕ್ರಂಸೇಠ್.

7) ಸುವರ್ಣ ಚತುಷ್ಕೋನ ಕಾರಿಡರ್ ಹೆದ್ದಾರಿ ಯೋಜನೆಯನ್ನು ಆರಂಭಿಸಲಾಗಿದ್ದು ಯಾವಾಗ ಹಾಗೂ ಆಗಿನ ಭಾರತದ ಪ್ರಧಾನಿ ಯಾರು?
- 1999 ರಲ್ಲಿ. ಅಟಲ್ ಬಿಹಾರಿ ವಾಜಪೇಯಿ.

8) "ವಿಶ್ವ ಸುನಾಮಿ ಜಾಗೃತಿ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
- ನವೆಂಬರ್ 5.

9) ಪ್ರಸ್ತುತ ಕೇಂದ್ರದ ಕಾರ್ಮಿಕ ಖಾತೆ  ರಾಜ್ಯ ಸಚಿವರು ಯಾರು?
- ಬಂಡಾರು ದತ್ತಾತ್ರೇಯ.

10) ಭಾರತ ಟೆಸ್ಟ್ ಕ್ರಿಕೆಟ್ ತಂಡದ ಮೊದಲ ನಾಯಕ ಯಾರು ಹಾಗೂ ಅವರ 100 ನೇ ಜನ್ಮ ದಿನಾಚರಣೆ ಹಿನ್ನಲೆಯಲ್ಲಿ 1994 ರಲ್ಲಿ ಆರಂಭಿಸಲಾದ ಪ್ರಶಸ್ತಿ ಯಾವುದು?
- ಸಿ.ಕೆ.ನಾಯ್ಡು, ಸಿ.ಕೆ.ನಾಯ್ಡು ಪ್ರಶಸ್ತಿ.

 * ಜ್ಞಾನಕಣಜದ 47 ನೇ ದಿನದ  ಪ್ರಶ್ನೋತ್ತರಗಳು :-

1) ಪ್ರಸ್ತುತ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಯಾರು?
- ಡಾ.ಪ್ರಕಾಶ್ ಕಮ್ಮರಡಿ.

2) ಭುವನ ಸುಂದರಿ ಸ್ಪರ್ಧೆಯ ವಿಜೇತೆಯ ಹೆಸರನ್ನು ತಪ್ಪಾಗಿ ಪ್ರಕಟಿಸುವ ಮೂಲಕ ಭಾರಿ ಅವಾಂತರ ಎಸಗಿದ್ದ ನಿರೂಪಕ ಯಾರು?
- ಸ್ಟೀವ್ ಹಾರ್ವೆ.

3) ಮರೀನಾ ಬೀಚ್ : ಚೆನ್ನೈ :: ಓಂ ಬೀಚ್ : ------.
- ಗೋಕರ್ಣ.

4) ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನವಾದ ಡಿಸೆಂಬರ್ 29 ನ್ನು ಪ್ರತಿ ವರ್ಷ ಯಾವ ದಿನವನ್ನಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ?
- ವಿಶ್ವ ಮಾನವ ದಿನವನ್ನಾಗಿ.

5) ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಮೈಸೂರು ವಿಶ್ವವಿದ್ಯಾಲಯದಲ್ಲಿ 103 ನೇ ಭಾರತೀಯ ವಿಜ್ಞಾನ ಸಮಾವೇಶ 2016 ರ ಜನವರಿ ---- ರಿಂದ ---- ರವರೆಗೆ ನಡೆಯಲಿದೆ?
- 3 ರಿಂದ 7.

6) " ಆನ್ ಮೈ ಟರ್ಮ್ಸ್" ಇದು ಯಾರ ಆತ್ಮಕಥೆಯಾಗಿದೆ?
- ಶರದ್ ಪವಾರ್.

7) ಸುನಾಮಿ ಅಲೆ ಅಪ್ಪಳಿಸಿ 2015, ಡಿಸೆಂಬರ್ 26 ಕ್ಕೆ ಎಷ್ಟು ವರ್ಷಗಳು ಗತಿಸಿದವು?
- 11 ವರ್ಷಗಳು.

8) ನಂಜನಗೂಡು : ರಸಬಾಳೆ :: ಕೊಡಗು : ------.
- ಕಿತ್ತಳೆ.

9) ಜಗತ್ತಿನ ಅತಿ ತೂಕದ ವ್ಯಕ್ತಿ ಆಂಡ್ರೆಸ್ ಮೊರೆನೊ (38) ಇತ್ತೀಚೆಗೆ ನಿಧನರಾದರು. ಇವರು ಯಾವ ದೇಶದವರು?
-  ಮೆಕ್ಸಿಕೋ.

10) 500 ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಹಳ್ಳಿಗಳನ್ನು ಮುಖ್ಯ ರಸ್ತೆಗಳೊಂದಿಗೆ ಸಂಪರ್ಕ ಕಲ್ಪಿಸುವುದು ಯಾವ ಯೋಜನೆಯ ಮುಖ್ಯ ಉದ್ದೇಶವಾಗಿದೆ?
- ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ.

 * ಜ್ಞಾನಕಣಜದ 48 ನೇ ದಿನದ  ಪ್ರಶ್ನೋತ್ತರಗಳು :-

1) ಪ್ರಸ್ತುತ ಕೇಂದ್ರದ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ಪೂರೈಕೆ ಖಾತೆ ಸಚಿವ ಯಾರು?
- ರಾಮ್ ವಿಲಾಸ್ ಪಾಸ್ವಾನ್.

2) ಎಲ್ಲ ರೀತಿಯ ಆರ್ ಎನ್ ಎ ಗಳ ಗುಂಪಿಗೆ ------ ಎಂದು ಕರೆಯುತ್ತಾರೆ?
- ಟ್ರಾನ್ಸ್ ಕ್ರಿಪ್ ಟೋಮ್.

3) ತೆಲಂಗಾಣ : ಕೆ. ಚಂದ್ರಶೇಖರರಾವ್ :: ಆಂಧ್ರಪ್ರದೇಶ : ------.
- ಚಂದ್ರಬಾಬು ನಾಯ್ಡು.

4) ಬೆಂಗಳೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಸ್ತುತ ಕುಲಪತಿ ಯಾರು?
- ಡಾ.ಶಿವಣ್ಣ.

5) ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಮಹಾ ನಿರ್ದೇಶಕರು ಯಾರು?
- ಡಾ.ಎಸ್.ಅಯ್ಯಪ್ಪನ್.

6) ದಕ್ಷಿಣ ಆಫ್ರಿಕಾದಿಂದ ಮಹಾತ್ಮ ಗಾಂಧೀಜಿ ಭಾರತಕ್ಕೆ ಮರಳಿ ಬಂದದ್ದು ಯಾವಾಗ?
- ಕ್ರಿಶ 1915 ರಲ್ಲಿ (ಜನವರಿ 9).

7) ಮಳೆಯ ಪ್ರಮಾಣವನ್ನು ಅಳೆಯುವ ಮಾಪಕ ಯಾವುದು?
- ಮಳೆಯ ಮಾಪಕ (ರೈನ್ ಗೇಜ್).

8) ಭಾರತದ ರೈಲ್ವೆ ವಿಭಾಗಗಳಲ್ಲಿ ಅತಿದೊಡ್ಡದು ಯಾವುದು?
- ಉತ್ತರರೈಲ್ವೆ(ಆಡಳಿತ ಕಛೇರಿ:- ದೆಹಲಿ).

9) ದೇಶದಲ್ಲೇ ಮೀನು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಯಾವುದು?
- ಪಶ್ಚಿಮಬಂಗಾಳ.

10) ಭಾರತದಲ್ಲಿ ಸ್ನೂಕರ್ ಮತ್ತು ಬಿಲಿಯರ್ಡ್ಸ್ ಲೋಕದಲ್ಲಿ "ಗೋಲ್ಡನ್ ಬಾಯ್" ಎಂದು ಹೆಸರಾದವರು ಯಾರು?
- ಪಂಕಜ್ ಅಡ್ವಾಣಿ.

* ಜ್ಞಾನಕಣಜದ 49 ನೇ ದಿನದ  ಪ್ರಶ್ನೋತ್ತರಗಳು :-

1) ವಿಶ್ವದ ನಂ.1 ಭಯೋತ್ಪಾದಕ ಸಂಘಟನೆ ಯಾವುದು?
- ಬೋಕೋಹರಾಂ (ನೈಜೀರಿಯಾ).

2) ಭಾರತ-ರೋಮ್ ಗಳ ಸಂಬಂಧ ಮತ್ತು ಅಂದಿನ ಭಾರತದ ರಾಜಕೀಯ ಸ್ಥಿತಿಯ ಕುರಿತು ತಿಳಿಸುವ ಪ್ಲಿನಿಯ ಗ್ರಂಥ ಯಾವುದು?
- ನ್ಯಾಚುರಲ್ ಹಿಸ್ಟೋರಿಯಾ.

3) ನೈರುತ್ಯ ರೈಲ್ವೆ ಆರಂಭಗೊಂಡದ್ದು ಯಾವಾಗ?
- 2003 ರಲ್ಲಿ (ಕೇಂದ್ರ ಕಛೇರಿ - ಹುಬ್ಬಳ್ಳಿ).
4) "ಸ್ಟ್ರೇಬರ್ಡ್ಸ್" ಕೃತಿಯ ಕರ್ತೃ ಯಾರು?
- ರವೀಂದ್ರನಾಥ ಟ್ಯಾಗೋರ್ (ಬಂಗಾಳಿ ಕವಿ).

5) ಡಿಜಿಟಲ್ ಇಂಡಿಯಾ ಯೋಜನೆ ಬಗ್ಗೆ ಜನಜಾಗೃತಿ ಮೂಡಿಸುವುದರಲ್ಲಿ ರಾಜ್ಯದ ಯಾವ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ?
- ಚಿಕ್ಕಮಗಳೂರು. (2nd ಬೆಂಗಳೂರು ಗ್ರಾಮಾಂತರ. 3ನೇ ಕೋಲಾರ).

6) ಡಿಜಿಟಲ್ ಇಂಡಿಯಾ ಯೋಜನೆಗೆ ನರೇಂದ್ರ ಮೋದಿಯವರು ಯಾವಾಗ ಚಾಲನೆ ನೀಡಿದರು?
- ಜುಲೈ 1, 2015.

7) ವನ್ಯಜೀವಿ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
- 1972 ರಲ್ಲಿ.

8) ಉತ್ತರ ಕರ್ನಾಟಕದ ಸಹ್ಯಾದ್ರಿ ಶ್ರೇಣಿ ಎಂದು ಖ್ಯಾತಿ ಪಡೆದ ಅರಣ್ಯ ಪ್ರದೇಶ ಯಾವುದು?
- ಕಪ್ಪತಗುಡ್ಡ ( ತಾಲೂಕು :- ಮುಂಡರಗಿ. ಜಿಲ್ಲೆ :- ಗದಗ).

9) ಅದಾನಿ ಗ್ರೂಪ್ ನ ಅಧ್ಯಕ್ಷರು ಯಾರು?
- ಗೌತಮ್ ಅದಾನಿ.

10) ಏಕದಿನ ಕ್ರಿಕೆಟ್ ನಲ್ಲಿ ದಕ್ಷಿಣಆಫ್ರಿಕಾದರ ಎ.ಬಿ.ಡಿವಿಲಿಯರ್ಸ್ ಕೇವಲ 16 ಎಸೆತಗಳಲ್ಲಿ ಅರ್ಧ ಶತಕ ಗಳಿಸಿದ ದಾಖಲೆ ಹೊಂದಿರುವುದು ಯಾವ ದೇಶದ ವಿರುದ್ಧ?
- ವೆಸ್ಟ್ ಇಂಡೀಸ್ (2015).


Post a Comment

0 Comments